Wednesday, August 02, 2006

ಗಂಡು ಹೆಣ್ಣಿನ ಆಕರ್ಷಣೆಯಲ್ಲಿ....

ಹೆಣ್ಣೊಬ್ಬಳು ಹೆಂಡತಿಯಾಗುತ್ತಾಳೆ. ಹೆಂಡತಿ ಮಕ್ಕಳ ತಾಯಿಯಾಗುತ್ತಾಳೆ. ವಯಸ್ಸು ಕಳೆದಂತೆ ಗಂಡನಿಗೂ ತಾಯಿಯಂತೇ ಕಾಣುತ್ತಾಳೆ. ಮಗುವೊಂದು ಹುಟ್ಟುತ್ತಲೇ ಆಕೆಯ ಸ್ತನಗಳನ್ನು ಚೀಪುತ್ತಾ ಅಮೃತಪಾನವನ್ನೇ ಮಾಡುತ್ತಾ ಬೆಳೆಯುತ್ತದೆ. ಗಂಡಾದರೆ ತನ್ನ ಜೀವಮಾನದುದ್ದಕ್ಕೂ ಇನ್ನೊಂದು ಬಗೆಯಲ್ಲಿ ಹೆಣ್ಣಿನ ತುಂಬು ಸ್ತನಗಳಾಕರ್ಷಣೆಗೆ ಮುಗಿಬೀಳುವುದರಲ್ಲೇ ಅದೆಂಥಹ ಅಮಿತಾನಂದ... ಹೆಣ್ಣಿಗಾದರೋ ತನ್ನ ಸೌಂದರ್ಯದ ಬಗ್ಗೆ ತುಂಬು ಹೆಮ್ಮೆಯೆ. ಆಕೆಗೆ ತನ್ನ ತುಂಬಿದೆದೆಗೆ(ಅಷ್ಟಿಷ್ಟು ತೆರೆದು ತೋರಿ)ಹೆಮ್ಮಯಿಂದ ಬೀಗುವುದರಲ್ಲೇ ಪರಮ ತೃಪ್ತಿಯಿರುವುದು ಇಂದಿನ ದಿನಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಿದೆ. ಈಗೀಗ ನಮ್ಮ ನಡುವೆ ಅದೂ ಸಹ ಸಹಜ ಸ್ವೀಕಾರರ್ಹವಾಗುತ್ತಿರುವುದನ್ನೂ ನೋಡುತ್ತಿದ್ದೇವಲ್ಲ. ಪ್ರಕೃತಿಯ ಈ ಸೃಷ್ಟಿ ವೈಚಿತ್ಯ್ರಕ್ಕೆ ನಾವು ಮಣಿಯಬೇಕಲ್ಲ... ಆದರೆ,ಗಂಡು ಹೆಣ್ಣಿನ ಸಂಬಂಧ ಕೇವಲ ಸಂಬಂಧವಲ್ಲದೆ ಜನ್ಮಜನ್ಮದ ಅನುಬಂಧವೆನಿಸುವುದೂ ಇಬ್ಬರಿಗೂ ಅನುಭವ ವೇದ್ಯವೇ ಸರಿ. ಯಾಕೆಂದರೆ, ಮನುಷ್ಯನ ಎಲ್ಲ ಭಾವನೆಗಳೂ ಪ್ರೇಮದ ತುರೀಯಾವಸ್ಥೆಯಲ್ಲಿ ಮಿಲನವಾಗುತ್ತವೆ. ಕಾಮದಲ್ಲಾಗುವುದು ಕೇವಲ ಶಾರೀರಿಕ ಅರ್ಪಣಾ ಭಾವ. ದೇಹಾತೀತ ಆತ್ಮ ಜಾಗೃತಿಗೆ ಪ್ರೇಮ ಸಮ್ಮಿಲನಕ್ಕಿಂತ ಶ್ರೇಷ್ಠ ಮೌಲ್ಯ ಮತ್ತೊಂದಿಲ್ಲ. ಆ ಮೌಲ್ಯ ಪರಸ್ಪರರಲ್ಲಿ ಕಂಡುಕೊಳ್ಳುವುದೂ ಅನ್ಯೋನ್ಯತೆಯುಕ್ತ ಮುಕ್ತ ಸಾಧನೆಯಿಂದಲೇ. ಬದುಕಿನ ಎಷ್ಟೋ ಸಂದರ್ಭಗಳಲ್ಲಿ ಅದು ಸುಲಭಸಾಧ್ಯವೆನಲ್ಲ ಅನಿಸುವುದೂ ಇದೆಯಲ್ಲ...
-ಎಚ್.ಶಿವರಾಂ

No comments: