Wednesday, April 24, 2019

ಹಿಂದೂಧರ್ಮ ಮತ್ತು ಸಂಸ್ಕೃತಿ

ರಾಜಕೀಯ ವಿಷಯ ವಿದ್ಯಾರ್ಥಿಗಳಿಗಲ್ಲ ಎಂದು ತಿಳಿಯಹೇಳುವ ಕಾಲವೊಂದಿತ್ತು. ಈಗಂತೂ ಶಾಲಾ ಕಾಲೇಜುಗಳಲ್ಲೂ ರಾಜಕೀಯ ನುಸುಳಿದ್ದು ಏನಾಗುತ್ತಿದೆ?
 ಇಂದಿನ ಮಕ್ಕಳೋ ಬಹಳ ಚುರುಕು.
 ಅವುಗಳಿಗೆ ದೇವರು, ಧರ್ಮ ಸಂಸ್ಕೃತಿ ಬಗ್ಗೆ ಖಂಡಿತ ಹೇಳಲೇಬೇಕಾದ ಕಾಲವಿದು. ಆದರೆ ಇಂದಿನ ತೀರಾ ವಿಚಿತ್ರ ವಿರೋಧಾಭಾಸದ ಪರಿಸ್ಥಿತಿಯಲ್ಲಿ ಮಕ್ಕಳೂ ಕೂಡ ಮಾನವ ಸಹಜ ದೌರ್ಬಲ್ಯದಿಂದ ಅಡ್ಡದಾರಿ ಹಿಡಿಯುವಂತಾಗಿದೆ. ಹಿಂದೂಧರ್ಮಸಂಸ್ಕೃತಿಯ ಕಟ್ಟಪಾಡುಗಳು ಆರೋಗ್ಯಕರವೆಂಬುದನ್ನೇ ಮರೆಯುವಂತಹ ವಾತಾವರಣ , ಪ್ರೈಮರಿಯಿಂದ ವಿಶ್ವವಿದ್ಯಾಲಯದವೆರೆಗೆ ಸೃಷ್ಟಿಸಲ್ಪಟ್ಟಿರುವುದು ಭಾರತ ಸಂಸ್ಕೃತಿ ಭವಿಷ್ಯದ ದೃಷ್ಟಿಯಲ್ಲಿ ಹಿತಕರವಲ್ಲ. ಆತಂಕಕಾರಿಯೇ ಅಲ್ಲವೇ ಸ್ನೇಹಿತರೇ,
 ನಮ್ಮ ಕಾಲದಲ್ಲಿ ಎಂಬುದಾಗಿ ಹಿರಿಯರು ಮಾತೆತ್ತುವಂತಿಲ್ಲ, ನಿಮ್ಮ ಕಾಲ ಹಳೆಯದೆಂದು ಪುಟ್ಟ ಮಕ್ಕಳೇ ಮೂದಲಿಸುತ್ತಾರೆ. ಕಾಲ ಯಾವುದಾದರೇನು? ಮಾನವೀಯ ಮೌಲ್ಯಗಳು ಎಲ್ಲಕಾಲಕ್ಕೂ ಒಂದೇ ತಾನೇ..? ಹೆತ್ತವರು ಹಳೆಬೇರಾದರೆ ಮಕ್ಕಳೂ ಹೊಸ ಚಿಗುರು...ತಾನೇ
 ವಿಜ್ಞಾನ ವಸ್ತುಗಳೂ ಅಷ್ಟೇ. 50ರ ದಶಕದಲ್ಲಿ ಒಂದು ರೂಂನಲ್ಲಿದ್ದ ಕಂಪ್ಯೂಟರ್  ಇಂದು ನಮ್ಮ ಜೇಬಿನಲ್ಲೂ ಮೊಬೈಲ್  ಆಗಿದೆ. ವಿಜ್ಞಾನದಲ್ಲೂ ಹಳೆ ಬೇರು ಹೊಸ ಚಿಗುರು‌.
ಇನ್ನು ಧರ್ಮ ಸಂಸ್ಕೃತಿ ಸಾಂಪ್ರದಾಯಗಳು ಆರೋಗ್ಯಕರ  ಎಂದರಿಯದೇ  ಅವುಗಳ ಮೂಲ  ಬೇರನ್ನೇ ಕೀಳುವಂತಾಗಿದೆ. ಸ್ವಂತಿಕೆ ಚಿಂತನೆಗಳಿಲ್ಲದೇ  ಕೇವಲ ಅಂಧಾನುಕರಣೆಯಲಿ ಯುವಪೀಳಿಗೆ ಎತ್ತ ಸಾಗಿದೆ?

ನಮ್ಮ ಕಾಲದಲ್ಲಿ, ಪ್ರೈಮರಿ ಶಾಲೆಯಲ್ಲೇ ಪಠ್ಯ ಪುಸ್ತಕಗಳಲ್ಲಿ  ಆರ್ಯರು, ವೇದಗಳ ಋಷಿ ಪರಂಪರೆಯ ಬಗ್ಗೆ , ಶ್ರೀರಾಮ, ಶ್ರೀಕೃಷ್ಣನ ಬಗ್ಗೆ ,  ಬುದ್ಧ, ಬಸವ ಆದಿ ಶಂಕರರ ರಾಮಾಯಣ. ಮಹಾಭಾರತ ಪುರಾಣ ಕಥೆಗಳ ಬಗ್ಗೆ, ಗುರುನಾನಕ್, ಕ್ರಿಸ್ತ, ಪೈಗಂಬರರ ಬಗ್ಗೆ ಪರಿಚಯವಿರುವ  ಪಾಠಗಳಿರುತ್ತಿದ್ದವು‌. ಹೀಗಾಗಿ ಚಿಕ್ಕಂದಿನಿಂದಲೇ  ಭಾರತ ಧರ್ಮ ಸಂಸ್ಕೃತಿ ಎಂದರೆ ಏನೆಂಬುದು ಮಕ್ಕಳಿಗೆ ಸ್ಪಷ್ಟವಾಗಿ  ಅರ್ಥವಾಗುತ್ತಿತ್ತು. ಮಕ್ಕಳೂ ಸಹ ನಾವು ಭಾರತೀಯರು ಹಿಂದೂ ಮುಸ್ಲಿಂ, ಕ್ರೈಸ್ತರು ನಾವೆಲ್ಲರೂ ಒಂದೇ ಎಂದು ಹೆಮ್ಮೆಪಡುವಂತಿದ್ದ ಕಾಲವದು.

ಬರು ಬರುತ್ತ ರಾಜಕೀಯದ ಕೆಸರೆರಚಾಟದಲಿ ಹಿಂದೂಧರ್ಮದಲ್ಲಿ ದೇವರು ಧರ್ಮ ಎಂದರೆ  ಕೇಸರೀಕರಣ ಎಂಬ ಟೀಕೆಗೆ  ಗುರಿಯಾಗಿ, ರಾಜಕೀಯದಲಿ  ಸ್ವಾನುಕೂಲ ಸಿಂಧು ಎಂಬಂತೇ ಹಿಂದೂಧರ್ಮವನ್ನು ಹತ್ತಿಕ್ಕುವ ಹುನ್ನಾರ.  ಎಡಪಂಥೀಯರೆಂಬ ಗುಂಪೂ ಹುಟ್ಟಿಕೊಂಡಿತು.
 ಅದರಲ್ಲಿ ಶಾಲಾ ಕಾಲೇಜು ಉಪನ್ಯಾಸಕರೂ ಗುರುತಿಸಿಕೊಳ್ಳುವಂತಾದದ್ದೂ ದುರಾದೃಷ್ಟಕರ. ಮಕ್ಕಳಿಗೆ ಮಾದರಿಯಾಗಬೇಕಾದ ಶಿಕ್ಷಕರೇ  ಸತ್ವಗುಣ ಪ್ರಧಾನ ವೆಂಬುದನ್ನು ವೈವಿಧ್ಯಮಯ ವಾಗಿ ನಿರೂಪಿಸುವ  ಹಿಂದೂಧರ್ಮ ದಲ್ಲಿ ದೈವಿಕತೆ ಮಾನವೀಯತೆ ಹಾಗೂ  ಉತ್ತಮ ನುಡಿ ನಡವಳಿಕೆ ನೈತಿಕತೆಗೆ ಪ್ರಮಾಣ್ಯವೇ ಇಲ್ಲವೆಂಬಂತೆ ವರ್ತಿಸುವುದು ಮಕ್ಕಳ ಭವಿಷ್ಯಕ್ಕೆ ಮಾರಕರವೇ...?
ಹಾಗಾಗಿ ಟೆಕ್ಷಟ್ ಬುಕ್ ಆಯ್ಕೆ ಕಮಿಟಿಯಲ್ಲಿಯೂ ರಾಜಕೀಯ ಢಾಳಾಗಿ ಶೋಭಿಸಿ ದೇವರು ಧರ್ಮ ಮುಖ್ಯವಾಗಿ ಹಿಂದೂಧರ್ಮದ ದೇವರು  ರಾಮಾಯಣ, ಮಹಾಭಾರತ ಧಾರ್ಮಿಕ ನಂಬಿಕೆ ಆಚಾರ ವಿಚಾರಗಳು ಮೂಢನಂಬಿಕೆ ಹೆಸರಲ್ಲೇ ಗೊಂದಲಮಯವಾಗಿ  ಕಾಣೆಯಾಗ ತೊಡಗಿದವು.
ಅಷ್ಟೇ ಅಲ್ಲ, ವಿಜ್ಞಾನ ತಂತ್ರಜ್ಞಾನ ಮುಂದುವರೆದಂತೆಲ್ಲ  ಹಿಂದೂಧರ್ಮ ದಲ್ಲೇ ಬುದ್ಧ, ಬಸವ, ವೀರಶೈವ, ಲಿಂಗಾಯತ ಎಂದೆಲ್ಲಾ ಧರ್ಮ ಒಡೆಯುವುದೂ  ಹಿಂದೂಗಳ ದೈವ ನಂಬಿಕೆ ಮೂರ್ತಿ ಪೂಜೆ ಯಜ್ಞ ಇತ್ಯಾದಿ ಗಳಲ್ಲೇ  ಆಧ್ಯಾತ್ಮಿಕ ತತ್ವಗಳು ಜೀವನ ಮೌಲ್ಯಗಳೂ   ಇವುಗಳ ಮೇಲೇ ಗದಾ ಪ್ರಹಾರ ಆಗತೊಡಗಿರುವುದು ಖಂಡನೀಯವೇ.
 ಮಕ್ಕಳಿಗೆ ಚಿಕ್ಕಂದಿನಿಂದಲೇ ಇಂಗ್ಲೀಷ್ ಪ್ರಧಾನ ಪಠ್ಯವೆನಿಸಿದ್ದರಿಂದಾಗಿ ಕನ್ನಡದ ಬಗ್ಗೆ ಅಸಡ್ಡೆ, ಉನ್ನತ ಉದ್ಯೋಗಕ್ಕೆ ಇಂಗ್ಲಿಷ್ ಅಂದಮೇಲೆ, ಕನ್ನಡ ಕಲೀತರೇನು ಪ್ರಯೋಜನ ಎಂಬಂತಾಗಿರುವುದು ಶೋಚನೀಯ ಸಂಗತಿ. ಅಂತೆಯೇ ಮನೆಯಲ್ಲಿ ದೇವರು ಧರ್ಮದ  ಸಾಂಪ್ರದಾಯಿಕ ಆಚರಣೆಗಳು ವಿಚಿತ್ರವೆನಿಸುವುದೂ  ಅವುಗಳ ಬಗ್ಗೆ ಮಕ್ಕಳಲ್ಲಿ ಅಸಹನೆ ಅಸಹಕಾರ ಬೆಳೆಯುವುದೆಂದರೆ  ಅದುುಮನೆಮನೆಗಳ
 ಗಂಭೀರ ಸಮಸ್ಯೆಯೆ ಆಗಿಬಿಟ್ಟಿದೆ.
 ಕಾರಣ ಹೊರಗಿನ ಪಾಶ್ಚಿಮಾತ್ಯ ಶೈಲಿಯ ಅಂಧಾನು ಕರಣೆಯ ವೈಪರೀತ್ಯವೇ. ಕಾಲೇಜಗಳಲ್ಲಂತೂ ಹೇಳತೀರದ ದಾಳಿಯಿಂದಲೇ ತಾನೇ...
 ಹೀಗಾಗಿ ಯುವಕ ಯುವತಿಯರು  ನಮ್ಮ ಹಿಂದೂಧರ್ಮ ಸಂಸ್ಕೃತಿಯಿಂದ ಮಾತ್ರ ದೂರವಾಗುವದಷ್ಟೇ ಅಲ್ಲ ಹೆತ್ತವರಿಂದ ಮನೆ ಮನಗಳಿಂದಲೇ ದೂರವಾಗವುದೂ ಖೇದಕರವೇ.
ಬಹಳ ಮುಖ್ಯವಾಗಿ ಶಾಲಾ ಕಾಲೇಜಿನಲ್ಲಿ ಮಕ್ಕಳಿಗೆ ದೇವರು ಧರ್ಮ ಸಂಸ್ಕೃತಿ ಬಗ್ಗೆ ಪ್ರಸ್ತಾಪವೆ ಬೇಡ ಅದು ಜಾತೀಯತೆ ಕೊಮುವಾದ ಎಂಬ ತಪ್ಪುಕಲ್ಪನೆ ಭಾರತೀಯ ಸಾಮಾಜದಲ್ಲಿ ಗಂಭಿರ ಸಾಂಕ್ರಾಮಿಕ ಪಿಡುಗಾಗಿ ಹಬ್ಬಿದ್ದು, ಮಂದಿನ ಮಕ್ಕಳ ಹಾಗೂ ಯುವಜನಾಂಗದ ಬೆಳವಣಿಗೆಯ ದೃಷ್ಟಿಯಲ್ಲಿ ಖಂಡಿತಾ ಆರೋಗ್ಯಕರವಲ್ಲ...

ಈ ವಿಷಯವಾಗಿ, ನನ್ನ 'ಶ್ರೀತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ" ಕೃತಿಯಲ್ಲಿ. ವಿಶ್ಲೇಷಣೆ ಇದೆ.

No comments: