Friday, July 20, 2007

ಫ್ಯಾಷನ್ ಪ್ರಪಂಚ!

ಫ್ಯಾಷನ್ ಪೆರೇಡ್, ಸೌಂದರ್ಯ ಸ್ಪರ್ಧೆ, ಪಾಪ್ ಮ್ಯುಸಿಕ್ ಇವೆಲ್ಲವೂ ನಮ್ಮ ದೇಶಕ್ಕೆ ಪಾಶ್ಚಾತ್ಯ ಸಂಸ್ಕೃತಿಯ ಬಳುವಳಿ. ಆಧುನಿಕ ಬದುಕಿನ ರೀತಿ ರಿವಾಜುಗಳನ್ನು ಒಲೈಸುವ ಯುವ ಪೀಳಿಗೆಯವರಿಗೆ ನಮ್ಮ ಸಂಸ್ಕೃತಿಯಲ್ಲಿಲ್ಲದ ಸ್ವಾತಂತ್ರ್ಯ ಸ್ವಚ್ಛಂಧ ಪಾಶ್ಚಾತ್ಯ ಸಂಸ್ಕೃತಿಗೇ ಮಾರುಹೋಗುವಂತಾಗಿದೆಯಲ್ಲ. ಆದರೆ, ಯುವ ಪೀಳಿಗೆಯವರಲ್ಲಿ ಇದರ ಪ್ರತಿಕೂಲ ಪರಿಣಾಮದ ಪರಿಕಲ್ಪನೆ ಇದ್ದವರು, ತಮ್ಮ ತನದ ಶೈಲಿ ಸ್ಪಷ್ಟಪಡಿಸಿಕೊಂಡವರು ಎಚ್ಚೆತ್ತು ಮುನ್ನೆಡೆದವರು ಒಳ್ಳೆಯ ರೀತಿಯಲ್ಲಿ ಬದುಕಿ ಯಶಸ್ವಿಯಾದವರು ತೀರಾ ವಿರಳವೇ.

ಕೆಲವೊಮ್ಮೆ ಬುದ್ಧಿಗಿಂತಲೂ ಸೌಂದರ್ಯಕ್ಕೆ ಹೆಚ್ಚಿನ ಅರ್ಹತೆ ದೊರೆಯುತ್ತಿರುವಾಗ ಅಂಗಾಂಗ ಪ್ರದರ್ಶನಕ್ಕೆ ಆದ್ಯತೆ ಇರುವಾಗ ತಮ್ಮತನ ಮರೆತು ಹೋಗುವ ಅಪಾಯವೇ ಇದೆಯಲ್ಲ! ಈಗೀಗ ಹೆಚ್ಚು-ಹಣ ಹೆಸರು ಮಾಡುತ್ತಿರುವವರಲ್ಲಿ ತಮ್ಮ ಮೈಮಾಟದಿಂದ ಅಂಗಾಂಗ ಪ್ರದರ್ಶನದಿಂದ ಮುಂದೆ ಬಂದವರೇ ಆಗಿದ್ದಾರೆಂಬುದು ಗಮನಾರ್ಹ. ಇತ್ತೀಚೆಗೆ ಸಿನಿಮಾ ನಟಿ ಶಿಲ್ಪ ಶೆಟ್ಟಿಯಂತಹವರ ಉದಾಹರಣೆಯೆ ಸಾಕು. ವಿಪರ್ಯಾಸವೆಂದರೆ ನಮ್ಮ ಹಿರಿಯರೂ ಕೂಡ ಫ್ಯಾಷನ್ ಲೋಕದ ಮೋಡಿಗೊಳಗಾಗಿದ್ದಾರೆ. ತಾವು ಮನೆ ತುಂಬಿಸಿಕೊಳ್ಳ ಬಯಸುವ ಸೊಸೆಯೊ ಮಾಡ್ ಆಗಿರಬೇಕೆಂದು ಆಗ್ರಹಪಡಿಸಿವವರಿದ್ದಾರೆ. ಅಂಥವರು ಯುವಕ/ಯುವತಿಯರನ್ನು ಪ್ರೋತ್ಸಾಹಿಸುತ್ತಾರೆ. ಹೀಗಾಗಿ ಫ್ಯಾಷನ್ ಲೋಕ ದಿನೇ ದಿನೇ ಝಗಮಘಿಸುತ್ತಿದೆ. ದಿನ ಪತ್ರಿಕೆಯ ಮುಖಪುಟದತ್ತ ಓದುಗ ಮೊಟ್ಟ ಮೊದಲಿಗೆ ಕಣ್ಣು ಹಾಹಿಸಿ ತಿರುಗಿಸುವ ಎಡ ಮೂಲೆಯನ್ನು ಪ್ರತಿ ನಿತ್ಯ ನಟೀಮಣಿಯೊ ಅಥವಾ ಹೊಸ ಮಾಡ್ ಹುಡುಗಿಯೊ ಅಲಂಕರಿಸಿ ಆ ಪತ್ರಿಕೆಯ ಆಕರ್ಷಣೆಯಾಗುತ್ತಾಳೆ. ಇನ್ನು ನಿಯತಕಾಲಿಕಗಳಲ್ಲಿ ವಾರದ ಪುರವಣೆ ಸಿನಿಮಾ ರಂಜನೆಯ ಪುಟಗಳಲ್ಲಿ ಅಂಥ ನಟೀ ಮಣಿಯರು ವೃದ್ಧರಾದವರಲ್ಲೂ ಮೈನವಿರೇಳಿಸುತ್ತಾಳೆಂದರೆ ಅತಿಶಯೋಕ್ತಿಯೇನಲ್ಲವಲ್ಲ.

ಫ್ಯಾಷನ್, ಮಾಡ್ಲಿಂಗ್ ನಲ್ಲಿ ಬರುಬರುತ್ತಾ ಬಿಚ್ಚುವಿಕೆಯೇ ಪ್ರಾಧಾನ್ಯವಾದಂತೆಲ್ಲ ಬಿಚ್ಚಮ್ಮಗಳಿಗೆ ಬೇಡಿಕೆಯೊ ಹೆಚ್ಚುವುದು ಸಹಜವೇ ಆಗಿದೆ. ಆದರೆ, ಎಲ್ ಬಿಚ್ಚಮ್ಮಗಳೂ ಯಶಸ್ವಿಯಾಗಲಾರರೆಂಬುದೂ ಬೇರೆ ಮಾತು. ಹಾಗೆಯೆ ಜೊಲ್ಲು ಸುರಿಸುವ ಎಲ್ಲ ಯುವಕರೂ ತಮ್ಮತನ ಉಳಿಸಿಕೊಂಡು ಒಳ್ಳೆಯ ರೀತಿಯಲ್ಲೆ ಇಂಥ ಚಟ ಹವ್ಯಾಸಗಳಿಂದ ಬದುಕ ಲಾರರಲ್ಲ. ಕಡೆಗೊಮ್ಮೆ ಹಣ ಸ್ಥಾನ ಮಾನಗಳು ದಕ್ಕದೇ ಹೋದಾಗ ಅದೇ ಬಿಚ್ಚಮ್ಮಗಳೆಷ್ಟೋ ತಮ್ಮ ಮನೆಗಳಿಂದಲೇ ದೂರವಾಗುವದರಲ್ಲಿ ಯಶಸ್ವಿಯಾಗಿ ಹೋಗುವ ಉದಾಹರಣೆಗಳಂತೂ ಖಂಡಿತ ಉಂಟಲ್ಲ.

ಮುಂಬೈ, ಚೆನ್ನೈ, ಬೆಂಗಳೂರು ಮುಂತಾದ ಮಹಾನಗರಗಳಲ್ಲಿ ಮಾಡಲಿಂಗ್ ಉದ್ಯೋಗ ಹೆಚ್ಚು ಹೆಚ್ಚು ವ್ಯಾಪಕವಾಗಿ ಬೆಳೆಯುತ್ತಿದೆ. ಈ ವೇದಿಕೆಯೆ ಸಿನಿಮಾ, ಟಿ.ವಿ.ತಾರೆಯರಾಗಲೂ ಸ್ಪ್ರಿಂಗ್ ಬೋರ್ಡ ಕೂಡ ಆಗುವುದುಂಟು. ಹೀಗೆ ಭಾರತದ ಮೊಲೆ ಮೊಲೆಯಿಂದ ಯುವತಿಯರು ಮಹಾನಗರಗಳಿಗೆ ಲಗ್ಗೆ ಇಡುತ್ತಿದ್ದಾರೆ. ಪ್ರೋಫೆಷನಲ್ ರೂಪದರ್ಶಿಗಳಾಗಿಯೊ ಇಲ್ಲವೇ ಹವ್ಯಾಸೀ (ಪಾರ್ಟ್ ಟೈಂ) ರೂಪದರ್ಶಿಗಳಾಗಿಯೊ ದುಡಿದವವರು ಕೆಲವರಾದರೆ, ಇನ್ನು ಕೆಲವರು ಇಲ್ಲೇ ಉಳಿಯಲಾರದೇ ಕೆಟ್ಟೇ ಹೊರಟು ಹೋದವರು. ಇನ್ನೂ ಕೆಲವರಿರುತ್ತಾರೆ ಸಮಾಜದ ಭಯದಿಂದ ತಮ್ಮ ಈ ಬಯಕೆ ಮನಸ್ಸಿನಲ್ಲೇ ಅಡಗಿಸಿಕೊಂಡವರು. ಅವಕಾಶಗಳಿಗಾಗಿ ಕಾಯುತ್ತಲೆ ಇರುವವರು. ಹೀಗಾಗಿ ಯುವಕ ಯುವತಿಯರಲ್ಲಿ ಫ್ಯಾಷನ್ ಒಂದು ಕೆಟ್ಟ ಚಟವಾಗಿ ಬೆಳೆಯುತ್ತಿರುವುದು ಆಧುನಿಕ ನಾಗರೀಕತೆಯ ಒಂದು ದುರಂತವೇ. ಹೇಳಬೇಕೆಂದರೆ, ಫ್ಯಾಷನ್ ಮಾಡ್ಲಿಂಗ್ ಖ್ಯಾತಿ ಮತ್ತು ಹಣವನ್ನು ತರುತ್ತದೆಯೆ ಹೊರತು ಹೆಚ್ಚಿನ ಪ್ರಮಾಣದ ಶೋಷಣೆಯಲ್ಲೇ ಕೊನೆಗೊಳ್ಳುತ್ತದೆ; ಅವರ ಯೌವನ ಕಾಂತಿ! ಬದುಕಿನ ಪ್ರೀತಿ ಎಂಬುದೇ ಮಾಯವಾಗಿ ಯಂತ್ರಕತೆಯಲ್ಲಿ ಭ್ರಮನಿರಸನಗೊಳ್ಳವವರೇ ಬಹಳ ಮಂದಿ. ಜೀವಿತದ ಕಡೆಗಾಲದಲ್ಲಿ ಒಂಟಿತನವೂ ಕಾಡ ತೊಡಗುತ್ತದೆ.

2 comments:

Anonymous said...

geLeyare,
kannaDada para chintane, charche, hot discussions ella ee hosa blog alloo nadeetide. illoo bhAgavahisONa banni !

http://enguru.blogspot.com

- KattEvu kannaDada naaDa, kai joDisu baara !

ShivaRam H said...

Nimma Abhimankke vandane
Biduvu doretaaga nimma website nallu bhagavahisuve