Saturday, December 05, 2009

ಕನ್ನಡದಲ್ಲಿ ಕಂಪ್ಯೂಟರ್ ಶಿಕ್ಷಣ

ಕಂಪ್ಯೂಟರ್ ಇಂದಿನ ದಿನಗಳಲ್ಲಿ ಕೇವಲ ಒಂದು ಪರಿಕಲ್ಪನೆಯಾಗಿ ಉಳಿದಿಲ್ಲ, ಅದು ನಮ್ಮ ಜನ ಜೀವನದ ಪರಿಕಲ್ಪನೆಯನ್ನೇ ಬದಲಿಸಿದೆ. ನಿತ್ಯ ಬದುಕಿನ ವಿಧಾನವೇ ಅದಾಗಿದೆ. 1950ರ ನಂತರದ ದಶಕಗಳಲ್ಲಿ ಯಾರೂ ಊಹಿಸಲಾರದಷ್ಟು ತ್ವರಿತಗತಿಯಲ್ಲಿ ಬೆಳವಣಿಗೆ ಕಂಡ ಕಂಪ್ಯೂಟರ್, ಇಂದಿಗೆ ಎ.ಟಿ.ಎಮ್. ಮೂಲಕ ಹಣ ಕೊಡುವ ಹೆಮ್ಮರವಾಗಿ ಬೆಳೆದು ನಿಂತಿದೆ. ಇಂದಿನ ದಿನಗಳಲ್ಲಿ ವಿದ್ಯಾವಂತರಾಗಿ ಕಂಪ್ಯೂಟರ್ ಕಲಿಯುವುದೂ ಬದ್ದಿವಂತಿಕೆಯ ಲಕ್ಷಣವೆನಿಸಿದೆ.

ಕಂಪ್ಯೂಟರ್ ಗೂ ಮನುಷ್ಯನಂತೆಯೆ ಎರಡು ಸ್ಮೃತಿಗಳಿವೆ. ಒಂದು ತಾತ್ಕಾಲಿಕ ಸ್ಮತಿ ಇನ್ನೊಂದು ಶಾಶ್ವತ ಸ್ಮೃತಿ (Random Access Memory, and Read only Memory). ಇವುಗಳ ಬಗ್ಗೆ ಮುಂದೆ ನೋಡೋಣ. ಕಂಪ್ಯೂಟರ್ ಸ್ವತಃ ಯಂತ್ರ ಭಾಷೆ ಹೊಂದಿದೆ. ಅದು ತನ್ನ ಯಂತ್ರ ಭಾಷೆಯಿಂದಲೇ ಬಳಕೆ ದಾರರ ಸೂಚನೆ ಆದೇಶಗಳನ್ನು(Instructions and commands) ಪಾಲಿಸುತ್ತದೆ. ತೆರೆಯಮೇಲೆ ಪ್ರತಿಕ್ರಿಯಿಸುತ್ತದೆ. ನಮ್ಮೊಡನೆ ಸಂವಾದ ನಡೆಸುತ್ತದೆ. ಅದೇ ಬೈನರಿ ಭಾಷೆಯಾಗಿದೆ. ಪ್ರಧಾನ ಕಾರ್ಯಾಚರಣೆಯ ತಂತ್ರಾಂಶವೂ ಸೇರಿದಂತೆ ಅಂದರೆ ಆಪರೇಟಿಂಗ್ ಸಿಸ್ಟಂ ಸೇರಿದಂತೆ ಬರೆಯಲ್ಪಡುವ ಪ್ರೋಗ್ರಾಂಮಿಂಗ್ ಸೋರ್ಸ್ಕೊಡ್ಸ್ ( ಸಂಕೇತಿಕ ಕಾರ್ಯವಿಧಿಗಳೆಲ್ಲವೂ) ಎಲ್ಲವೂ ತೆರೆಯ ಮರೆಯಲ್ಲೇ ಕಂಪೈಲರ್ ಗಳಿಂದ ಬೈನರಿ ಭಾಷೆಗೆ ತರ್ಜುಮೆಗೊಳ್ಳುತ್ತವೆ.

ಕಂಪ್ಯೂಟರ್ ಮೊದಲು ಗಣಿತದ ಲೆಕ್ಕಾಚಾರ ಪ್ರಕ್ರಿಯೆಗಳನ್ನು ಮಾಡುಂತಹ ಯಂತ್ರವಷ್ಟೇ ಆಗಿತ್ತು. ಅದರಾಚೆಗೂ ಬೆಳೆದು ಅಭಿವೃದ್ಧಿಪಥದಲ್ಲಿ ಸಾಗಿರುವ ಕಂಪ್ಯೂಟರ್ಗೆ ತಿಳಿಯುವುದು ದ್ಚಿಮಾನ ಪದ್ಧತಿಯ ಸಂಖ್ಯೆಗಳೇ. ಅಕ್ಷರಗಳು, ಅಂಕೆಗಳು, ಚಿತ್ರಗಳು, ಶಬ್ಬಗಳು, ಕೋಮಾ, ಫುಲ್ ಸ್ಟಾಪ್, ಪಂಕ್ಷಯೇಷನ್ , ಇತರೆ ಏನೆಲ್ಲವೂ ಸೇರಿದಂತೆ ಸ್ವತಃ ಅದರ ಕಾರ್ಯನಿರ್ವಹಣೆಯಲ್ಲಿನ ಸೂಚನಾ ವಿಧಿ ವಿಧಾನಗಳೇ ಸಂಖ್ಯೆಗಳಿಂದ ಕೂಡಿರುತ್ತವೆ. ಇದೆಲ್ಲವೂ ದ್ಚಿಮಾನ ಪದ್ಧತಿಯ ಬೈನರಿ ಕೋಡ್ಸ್ಗಳಿಂದಲೇ ಸಾಧ್ಯವಾಗಿದೆ. ಕಂಪ್ಯೂಟರ್ ಈ ಕೆಳಕಂಡ ಸ್ತರಗಳಲ್ಲಿ ಕೆಲಸ ಮಾಡುತ್ತದೆ-

1.ಹಾರ್ಡ್ ವೇರ್- ಬಿಡಿಭಾಗಗಳು,
2.ಸಾಫ್ಟ್ ವೇರ್ ಅಥವಾ ಪ್ರೋಗ್ರಾಂಸ್ – ತಂತ್ರಾಂಶಗಳು,
3.ಡೇಟಾ- ದತ್ತಾಂಶಗಳು,
4. ಪ್ರಾಸೆಸಿಂಗ್- ಸಂಸ್ಕರಣೆ ಮತ್ತು
5. ಔಟ್ ಪುಟ್ ರಿಸಲ್ಟ್- ಇನ್ ಫರ್ಮೇ ಷನ್- ಮಾಹಿತಿಯಾಗಿ ಫಲಿತಾಂಶಗಳು.
-ಇದನ್ನೆಲ್ಲ ಬಳಸಿಕೊಳ್ಳುವ ನಾವೇ ಯೂಸರ್ಸ್-ಬಳಕೆದಾರರು.
- "ವಿನ್ ಕಂಪ್ಯೂಟರ್ಸ " ಕೆಳಗಿನ ಲಿಂಕ್ ಒತ್ತಿ
ವಿನ್ ಕಂಪ್ಯೂಟರ್ಸ...>>> ಇಲ್ಲಿ ಕ್ಲಿಕ್ಕಿಸಿ

2 comments:

Unknown said...

Further more information is not entered in this site about computer education.

ShivaRam H said...

Please see this link also,
http://wincomputerskalike.blogspot.com