ನವವಸಂತ ನಗುತ ಬರಲು
ಯುಗಾದಿ ಶುಭೋದಯವ ಹಾಡಿದೆ;
ಹೊಸಬೆಳಕಲಿ ಅರುಣರಾಗ ನುಡಿಯಲು
ಶ್ರೀರಾಮನವಮಿ ಬಂದಿದೆ.
ಹೊಸವರುಷದಿ ಹಬ್ಬಗಳ ಸಾಲಿನಲಿ
ರಾಮನವಮಿ ಮೊದಲಿಗೆ;
ಹೊಸಹರುಷದಿ ಒಂದುಗೂಡಿ
ಕೋಸಂಬರಿ ಪಾನಕಸವಿಯೆ
ಅಮೃತಧಾರೆ ಪ್ರೀತಿಗೆ.
ಚೈತ್ರದಿ ಚಿರಂತನ ಚೇತನವು
ಹೊಸಭಾವ-ಬಂಧಗಳ ಬೆಸೆಯೆ
ಹಳೆಯನೋವನೆಲ್ಲ ಮರೆಸಿದೆ;
ಸಾತ್ವಿಕಸ್ವರೂಪಿ ಶ್ರೀರಾಮನ
ನೀತಿ ರೀತಿ ಬದುಕಿನಲ್ಲಿ ಮೆರೆದಿದೆ.
No comments:
Post a Comment