Wednesday, April 24, 2019

ಹಿಂದೂಧರ್ಮ ಮತ್ತು ಸಂಸ್ಕೃತಿ

ರಾಜಕೀಯ ವಿಷಯ ವಿದ್ಯಾರ್ಥಿಗಳಿಗಲ್ಲ ಎಂದು ತಿಳಿಯಹೇಳುವ ಕಾಲವೊಂದಿತ್ತು. ಈಗಂತೂ ಶಾಲಾ ಕಾಲೇಜುಗಳಲ್ಲೂ ರಾಜಕೀಯ ನುಸುಳಿದ್ದು ಏನಾಗುತ್ತಿದೆ?
 ಇಂದಿನ ಮಕ್ಕಳೋ ಬಹಳ ಚುರುಕು.
 ಅವುಗಳಿಗೆ ದೇವರು, ಧರ್ಮ ಸಂಸ್ಕೃತಿ ಬಗ್ಗೆ ಖಂಡಿತ ಹೇಳಲೇಬೇಕಾದ ಕಾಲವಿದು. ಆದರೆ ಇಂದಿನ ತೀರಾ ವಿಚಿತ್ರ ವಿರೋಧಾಭಾಸದ ಪರಿಸ್ಥಿತಿಯಲ್ಲಿ ಮಕ್ಕಳೂ ಕೂಡ ಮಾನವ ಸಹಜ ದೌರ್ಬಲ್ಯದಿಂದ ಅಡ್ಡದಾರಿ ಹಿಡಿಯುವಂತಾಗಿದೆ. ಹಿಂದೂಧರ್ಮಸಂಸ್ಕೃತಿಯ ಕಟ್ಟಪಾಡುಗಳು ಆರೋಗ್ಯಕರವೆಂಬುದನ್ನೇ ಮರೆಯುವಂತಹ ವಾತಾವರಣ , ಪ್ರೈಮರಿಯಿಂದ ವಿಶ್ವವಿದ್ಯಾಲಯದವೆರೆಗೆ ಸೃಷ್ಟಿಸಲ್ಪಟ್ಟಿರುವುದು ಭಾರತ ಸಂಸ್ಕೃತಿ ಭವಿಷ್ಯದ ದೃಷ್ಟಿಯಲ್ಲಿ ಹಿತಕರವಲ್ಲ. ಆತಂಕಕಾರಿಯೇ ಅಲ್ಲವೇ ಸ್ನೇಹಿತರೇ,
 ನಮ್ಮ ಕಾಲದಲ್ಲಿ ಎಂಬುದಾಗಿ ಹಿರಿಯರು ಮಾತೆತ್ತುವಂತಿಲ್ಲ, ನಿಮ್ಮ ಕಾಲ ಹಳೆಯದೆಂದು ಪುಟ್ಟ ಮಕ್ಕಳೇ ಮೂದಲಿಸುತ್ತಾರೆ. ಕಾಲ ಯಾವುದಾದರೇನು? ಮಾನವೀಯ ಮೌಲ್ಯಗಳು ಎಲ್ಲಕಾಲಕ್ಕೂ ಒಂದೇ ತಾನೇ..? ಹೆತ್ತವರು ಹಳೆಬೇರಾದರೆ ಮಕ್ಕಳೂ ಹೊಸ ಚಿಗುರು...ತಾನೇ
 ವಿಜ್ಞಾನ ವಸ್ತುಗಳೂ ಅಷ್ಟೇ. 50ರ ದಶಕದಲ್ಲಿ ಒಂದು ರೂಂನಲ್ಲಿದ್ದ ಕಂಪ್ಯೂಟರ್  ಇಂದು ನಮ್ಮ ಜೇಬಿನಲ್ಲೂ ಮೊಬೈಲ್  ಆಗಿದೆ. ವಿಜ್ಞಾನದಲ್ಲೂ ಹಳೆ ಬೇರು ಹೊಸ ಚಿಗುರು‌.
ಇನ್ನು ಧರ್ಮ ಸಂಸ್ಕೃತಿ ಸಾಂಪ್ರದಾಯಗಳು ಆರೋಗ್ಯಕರ  ಎಂದರಿಯದೇ  ಅವುಗಳ ಮೂಲ  ಬೇರನ್ನೇ ಕೀಳುವಂತಾಗಿದೆ. ಸ್ವಂತಿಕೆ ಚಿಂತನೆಗಳಿಲ್ಲದೇ  ಕೇವಲ ಅಂಧಾನುಕರಣೆಯಲಿ ಯುವಪೀಳಿಗೆ ಎತ್ತ ಸಾಗಿದೆ?

ನಮ್ಮ ಕಾಲದಲ್ಲಿ, ಪ್ರೈಮರಿ ಶಾಲೆಯಲ್ಲೇ ಪಠ್ಯ ಪುಸ್ತಕಗಳಲ್ಲಿ  ಆರ್ಯರು, ವೇದಗಳ ಋಷಿ ಪರಂಪರೆಯ ಬಗ್ಗೆ , ಶ್ರೀರಾಮ, ಶ್ರೀಕೃಷ್ಣನ ಬಗ್ಗೆ ,  ಬುದ್ಧ, ಬಸವ ಆದಿ ಶಂಕರರ ರಾಮಾಯಣ. ಮಹಾಭಾರತ ಪುರಾಣ ಕಥೆಗಳ ಬಗ್ಗೆ, ಗುರುನಾನಕ್, ಕ್ರಿಸ್ತ, ಪೈಗಂಬರರ ಬಗ್ಗೆ ಪರಿಚಯವಿರುವ  ಪಾಠಗಳಿರುತ್ತಿದ್ದವು‌. ಹೀಗಾಗಿ ಚಿಕ್ಕಂದಿನಿಂದಲೇ  ಭಾರತ ಧರ್ಮ ಸಂಸ್ಕೃತಿ ಎಂದರೆ ಏನೆಂಬುದು ಮಕ್ಕಳಿಗೆ ಸ್ಪಷ್ಟವಾಗಿ  ಅರ್ಥವಾಗುತ್ತಿತ್ತು. ಮಕ್ಕಳೂ ಸಹ ನಾವು ಭಾರತೀಯರು ಹಿಂದೂ ಮುಸ್ಲಿಂ, ಕ್ರೈಸ್ತರು ನಾವೆಲ್ಲರೂ ಒಂದೇ ಎಂದು ಹೆಮ್ಮೆಪಡುವಂತಿದ್ದ ಕಾಲವದು.

ಬರು ಬರುತ್ತ ರಾಜಕೀಯದ ಕೆಸರೆರಚಾಟದಲಿ ಹಿಂದೂಧರ್ಮದಲ್ಲಿ ದೇವರು ಧರ್ಮ ಎಂದರೆ  ಕೇಸರೀಕರಣ ಎಂಬ ಟೀಕೆಗೆ  ಗುರಿಯಾಗಿ, ರಾಜಕೀಯದಲಿ  ಸ್ವಾನುಕೂಲ ಸಿಂಧು ಎಂಬಂತೇ ಹಿಂದೂಧರ್ಮವನ್ನು ಹತ್ತಿಕ್ಕುವ ಹುನ್ನಾರ.  ಎಡಪಂಥೀಯರೆಂಬ ಗುಂಪೂ ಹುಟ್ಟಿಕೊಂಡಿತು.
 ಅದರಲ್ಲಿ ಶಾಲಾ ಕಾಲೇಜು ಉಪನ್ಯಾಸಕರೂ ಗುರುತಿಸಿಕೊಳ್ಳುವಂತಾದದ್ದೂ ದುರಾದೃಷ್ಟಕರ. ಮಕ್ಕಳಿಗೆ ಮಾದರಿಯಾಗಬೇಕಾದ ಶಿಕ್ಷಕರೇ  ಸತ್ವಗುಣ ಪ್ರಧಾನ ವೆಂಬುದನ್ನು ವೈವಿಧ್ಯಮಯ ವಾಗಿ ನಿರೂಪಿಸುವ  ಹಿಂದೂಧರ್ಮ ದಲ್ಲಿ ದೈವಿಕತೆ ಮಾನವೀಯತೆ ಹಾಗೂ  ಉತ್ತಮ ನುಡಿ ನಡವಳಿಕೆ ನೈತಿಕತೆಗೆ ಪ್ರಮಾಣ್ಯವೇ ಇಲ್ಲವೆಂಬಂತೆ ವರ್ತಿಸುವುದು ಮಕ್ಕಳ ಭವಿಷ್ಯಕ್ಕೆ ಮಾರಕರವೇ...?
ಹಾಗಾಗಿ ಟೆಕ್ಷಟ್ ಬುಕ್ ಆಯ್ಕೆ ಕಮಿಟಿಯಲ್ಲಿಯೂ ರಾಜಕೀಯ ಢಾಳಾಗಿ ಶೋಭಿಸಿ ದೇವರು ಧರ್ಮ ಮುಖ್ಯವಾಗಿ ಹಿಂದೂಧರ್ಮದ ದೇವರು  ರಾಮಾಯಣ, ಮಹಾಭಾರತ ಧಾರ್ಮಿಕ ನಂಬಿಕೆ ಆಚಾರ ವಿಚಾರಗಳು ಮೂಢನಂಬಿಕೆ ಹೆಸರಲ್ಲೇ ಗೊಂದಲಮಯವಾಗಿ  ಕಾಣೆಯಾಗ ತೊಡಗಿದವು.
ಅಷ್ಟೇ ಅಲ್ಲ, ವಿಜ್ಞಾನ ತಂತ್ರಜ್ಞಾನ ಮುಂದುವರೆದಂತೆಲ್ಲ  ಹಿಂದೂಧರ್ಮ ದಲ್ಲೇ ಬುದ್ಧ, ಬಸವ, ವೀರಶೈವ, ಲಿಂಗಾಯತ ಎಂದೆಲ್ಲಾ ಧರ್ಮ ಒಡೆಯುವುದೂ  ಹಿಂದೂಗಳ ದೈವ ನಂಬಿಕೆ ಮೂರ್ತಿ ಪೂಜೆ ಯಜ್ಞ ಇತ್ಯಾದಿ ಗಳಲ್ಲೇ  ಆಧ್ಯಾತ್ಮಿಕ ತತ್ವಗಳು ಜೀವನ ಮೌಲ್ಯಗಳೂ   ಇವುಗಳ ಮೇಲೇ ಗದಾ ಪ್ರಹಾರ ಆಗತೊಡಗಿರುವುದು ಖಂಡನೀಯವೇ.
 ಮಕ್ಕಳಿಗೆ ಚಿಕ್ಕಂದಿನಿಂದಲೇ ಇಂಗ್ಲೀಷ್ ಪ್ರಧಾನ ಪಠ್ಯವೆನಿಸಿದ್ದರಿಂದಾಗಿ ಕನ್ನಡದ ಬಗ್ಗೆ ಅಸಡ್ಡೆ, ಉನ್ನತ ಉದ್ಯೋಗಕ್ಕೆ ಇಂಗ್ಲಿಷ್ ಅಂದಮೇಲೆ, ಕನ್ನಡ ಕಲೀತರೇನು ಪ್ರಯೋಜನ ಎಂಬಂತಾಗಿರುವುದು ಶೋಚನೀಯ ಸಂಗತಿ. ಅಂತೆಯೇ ಮನೆಯಲ್ಲಿ ದೇವರು ಧರ್ಮದ  ಸಾಂಪ್ರದಾಯಿಕ ಆಚರಣೆಗಳು ವಿಚಿತ್ರವೆನಿಸುವುದೂ  ಅವುಗಳ ಬಗ್ಗೆ ಮಕ್ಕಳಲ್ಲಿ ಅಸಹನೆ ಅಸಹಕಾರ ಬೆಳೆಯುವುದೆಂದರೆ  ಅದುುಮನೆಮನೆಗಳ
 ಗಂಭೀರ ಸಮಸ್ಯೆಯೆ ಆಗಿಬಿಟ್ಟಿದೆ.
 ಕಾರಣ ಹೊರಗಿನ ಪಾಶ್ಚಿಮಾತ್ಯ ಶೈಲಿಯ ಅಂಧಾನು ಕರಣೆಯ ವೈಪರೀತ್ಯವೇ. ಕಾಲೇಜಗಳಲ್ಲಂತೂ ಹೇಳತೀರದ ದಾಳಿಯಿಂದಲೇ ತಾನೇ...
 ಹೀಗಾಗಿ ಯುವಕ ಯುವತಿಯರು  ನಮ್ಮ ಹಿಂದೂಧರ್ಮ ಸಂಸ್ಕೃತಿಯಿಂದ ಮಾತ್ರ ದೂರವಾಗುವದಷ್ಟೇ ಅಲ್ಲ ಹೆತ್ತವರಿಂದ ಮನೆ ಮನಗಳಿಂದಲೇ ದೂರವಾಗವುದೂ ಖೇದಕರವೇ.
ಬಹಳ ಮುಖ್ಯವಾಗಿ ಶಾಲಾ ಕಾಲೇಜಿನಲ್ಲಿ ಮಕ್ಕಳಿಗೆ ದೇವರು ಧರ್ಮ ಸಂಸ್ಕೃತಿ ಬಗ್ಗೆ ಪ್ರಸ್ತಾಪವೆ ಬೇಡ ಅದು ಜಾತೀಯತೆ ಕೊಮುವಾದ ಎಂಬ ತಪ್ಪುಕಲ್ಪನೆ ಭಾರತೀಯ ಸಾಮಾಜದಲ್ಲಿ ಗಂಭಿರ ಸಾಂಕ್ರಾಮಿಕ ಪಿಡುಗಾಗಿ ಹಬ್ಬಿದ್ದು, ಮಂದಿನ ಮಕ್ಕಳ ಹಾಗೂ ಯುವಜನಾಂಗದ ಬೆಳವಣಿಗೆಯ ದೃಷ್ಟಿಯಲ್ಲಿ ಖಂಡಿತಾ ಆರೋಗ್ಯಕರವಲ್ಲ...

ಈ ವಿಷಯವಾಗಿ, ನನ್ನ 'ಶ್ರೀತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ" ಕೃತಿಯಲ್ಲಿ. ವಿಶ್ಲೇಷಣೆ ಇದೆ.

Tuesday, March 05, 2019

ಮಹಾಶಿವರಾತ್ರಿ ವೈಶಿಷ್ಟ್ಯತೆ

ಒಮ್ಮೆ ಬ್ರಹ್ಮನಿಗೂ ವಿಷ್ಣುವಿಗೂ ನಡುವೆ ಚರ್ಚೆ ನಡೆಯಿತು,
ಬ್ರಹ್ಮ ತನ್ನ ಸೃಷ್ಟಿಕಾರ್ಯ ದೊಡ್ಡದೋ
ವಿಷ್ಣು ತನ್ನ ಸ್ಥಿತಿಸಂರಕ್ಷಣೆ ದೊಡ್ಡದೋ ಎಂಬುದಾಗಿ.
ಆಗ ಮಧ್ಯೆ ಪ್ರವೇಶಿಸಿದ ಶಿವನು ಯ್ಯೋಮ ಭೂಮಿ ಮೀರಿದ ಎತ್ತರಕ್ಕೆ ತನ್ನ ಲಿಂಗಸ್ವರೂಪೀ ಕಂಭದ ದರ್ಶನ ನೀಡಿ, ಈ ಸ್ಥಂಭದ ಅದಿ ಅಂತ್ಯ ಎಲ್ಲಿದೆ? ಹುಡುಕುವಿರಾ? ಎಂದನಂತೆ.
ಅರ್ಥವಾಯಿತೇ? ಸೃಷ್ಟಿ - ಸ್ಥಿತಿ ಕಾರ್ಯ ಇವೆರಡೂ  ನಡೆಯುತ್ತಲೇ ಇರುತ್ತದೆ. ನಿತ್ಯ ನಿರಂತರ ಗೋಚರವೂ ಅಗೋಚರವೂ ಆಗಿರುತ್ತವೆ; ಸೃಷ್ಟಿಗೂ ಸ್ಥಿತಿಗೂ ಆದಿ - ಅಂತ್ಯ ಇಲ್ಲ  ಎಂಬ ಅಖಂಡ ಸತ್ಯವನ್ನು ಶಿವ ನಿರೂಪಿಸಿದ ಮಹತ್ವದ ದಿನವೇ ಮಹಾಶಿವರಾತ್ರಿ ಹಬ್ಬವನ್ನಾಗಿ ಹಿಂದೂಗಳೆಲ್ಲರೂ ಆಚರಿಸುತ್ತೇವೆ. ಪರಂಪರಾಗತ ಶಿವಾರಾಧನೆ ಮಾಡವ ಜನಾಂಗದವರಿಗೆ ಇದು ವಿಶೇಷ   ಹಬ್ಬವೆನಿಸಿದೆಯಷ್ಟೇ.
ಹಿಂದೂಗಳು ಶಿವ ಹೆಚ್ಚೋ ವಿಷ್ಣು ಹೆಚ್ಚೋ ಎಂದು ವೃಥಾ ವಾಗ್ವಾದ ಮಾಡುವರೇಕೆ?
ಆದ್ದರಿಂದ, ಶಿವನವನು ಆದಿ ಅಂತ್ಯವಿಲ್ಲದ
ಸತ್ಯಸ್ವರೂಪಿಯಾಗಿ ಲಯಕ್ಕೆ ಕಾರಣನಾಗವನು.
ವಿಷ್ಣು ಆದಿ ಅಂತ್ಯವಿಲ್ಲದ ಸತ್ವಸ್ವರೂಪಿಯಾಗಿ
ಸ್ಥಿತಿ ಸಂರಕ್ಷನಾಗಿರುವನು.
ಬ್ರಹ್ಮನ ಸೃಷ್ಟಿ, ವಿಷ್ಣುವಿನ ಸ್ಥಿತಿ ರಕ್ಷಣೆ ಎಂಬುದು ನಭೋ ಮಂಡಲದಲ್ಲಿ ನಿತ್ಯನಿರಂತರ ನಡೆಯುವುದು ಎಂಬುದರ ಸಂಕೇತವಾಗಿ
ವಿಷ್ಣುವಿನ ನಾಭಿಯಲ್ಲರಳಿದ ಕಮಲದಲ್ಲಿ ಬ್ರಹ್ಮ ಉಪಸ್ಥಿತನಾಗಿರುವನು.
ಇದೆಲ್ಲವೂ  ಸನಾತನ ಹಿಂದೂಧರ್ಮದಲ್ಲಿ
ವೈವಿಧ್ಯಮಯವಾಗಿದೆ;  ಅರ್ಥಪೂರ್ಣವಾಗಿದೆ.
ನಮ್ಮ ಆದಿ ಋಷಿ ಮಹರ್ಷಿಗಳ ದೂರ ದೃಷ್ಟಿ ದಿವ್ಯ ದೃಷ್ಟಿ ಅಮೋಘವಾದದ್ದು.

ಸತ್ಯಬೇರೆಯಲ್ಲ ಸತ್ವ ಬೇರೆಯಲ್ಲ,
ಸೃಷ್ಟಿ ಸ್ಥಿತಿ ಇಲ್ಲದೇ ಜೀವ ಜಗತ್ತು ಇಲ್ಲ
ಪ್ರಪಂಚದಲ್ಲಿ ದೈವಾರಾಧನೆಗಳೆಂಬುದಿಲ್ಲ.
ಅಂತೆಯೆ
ಶಿವೋಶ್ಚ ಹೃದಯಂ ವಿಷ್ಣು
ವಿಷ್ಣೋಶ್ಚ ಹೃದಯಂ ಶಿವ |
ಶಿವ ವಿಷ್ಣೋಶ್ಚ ಹೃದಯಂ ಬ್ರಹ್ಮ ||
ಎನ್ನುತ್ತದೆ ವೆದಾಂತ.

ಶಿವರಾತ್ರಿಯ ಮತ್ತೊಂದು ವಿಶೆಷವೆಂದರೆ, ಶಿವನು ಪಾರ್ವತಿ ಹಿಮವಂತನ ಮಗಳಾದ ಗಿರಿಜೆಯನ್ನು ಅಂದರೆ ಪಾರ್ವತಿ ದೇವಿಯನ್ನು ವಿವಹವಾಗಿದ್ದು ಶಿವರಾತ್ರಿಯ ದಿನವೇ.. ಪಾರ್ವತಿ ದೇವಿಯು ಶಿವರಾತ್ರಿಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿ.. ಶಿವನ ಜಪ ಮಾಡಿ ಶಿವನನ್ನು ವಲಿಸಿಕೊಂಡು ವಿವಾಹಳಾದಳು...  ಹೀಗೆ ಹಿಂದೂ ಪುರಾಣಗಳಲ್ಲಿ ಶಿವರಾತ್ರಿಗೆ ಮಹತ್ವದ ಹಿನ್ನೆಲೆ ಇದೆ..

ಮಹಾ ಶಿವರಾತ್ರಿ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚಿ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ. ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ,೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ.

ಮೊದಲನೆಯ ಆಯಾಮದಲ್ಲಿ ಹಾಲು, ಎರಡನೆಯ ಆಯಾಮದಲ್ಲಿ ಮೊಸರು, ಮೂರನೆಯ ಆಯಾಮದಲ್ಲಿ ತುಪ್ಪ ಹಾಗೂ ನಾಲ್ಕನೆಯ ಆಯಾಮದಲ್ಲಿ ಜೇನುತುಪ್ಪಗಳಿಂದ ಶಿವನಿಗೆ ಅಭಿಷೇಕ ಮಾಡುವ ಪದ್ಧತಿಯೂ
ಕೆಲವೆಡೆ ಇದೆ.

ಶಿವರಾತ್ರಿ , ಜಾಗರಣೆ ವೈಶಿಷ್ಟ್ಯ...
ಒಂದು ಶಿವರಾತ್ರಿ ವ್ರತವನ್ನು ಆಚರಿಸಿದರೆ, ಸಾವಿರ ಏಕಾದಶಿ  ವ್ರತಗಳು ಆಚರಿಸಿದಷ್ಟು ಫಲಗಳು ಹಾಗೂ ಕಾಶಿಯಲ್ಲಿ ಮುಕ್ತಿ   ಪಡೆದ ಪುಣ್ಯ ಫಲಗಳು ಸಿಗುತ್ತದೆಂದು ಶಿವ ಪುರಾಣದಲ್ಲಿ  ಹೇಳಲಾಗಿದೆ.

ಶಿವರಾತ್ರಿಯಂದು ಮುಕ್ಕಣ್ಣನನ್ನು ಪೂಜಿಸಿ ಜಾಗರಣೆ  ಮಾಡುವುದಕ್ಕೂ ಅರ್ಥವಿದೆ. ಮಧ್ಯರಾತ್ರಿಯಲ್ಲಿ ಶಿವನಿಗೂ  ಪಾರ್ವತಿಗೂ ಕಲ್ಯಾಣವಾಯಿತು. ಈ ವಿವಾಹಕ್ಕೆ ಮೂರು  ಲೋಕಗಳು ಅಂದು ಜಾಗರಣೆ  ಮಾಡಿರುತ್ತವೆ. ಈ ಕಾರಣದಿಂದ   ಅಂದು ನಿದ್ರೆ ಮಾಡದೆ ಶಿವರಾತ್ರಿ ಜಾಗರಣೆ ಮಾಡಬೇಕೆಂದು  ಹೇಳಲಾಗುತ್ತದೆ. ಇದಲ್ಲದೆ, ವರ್ಷಕಾಲ ನಮ್ಮನ್ನು ಕಾಯುವ  ಶಿವನಿಗೆ ಒಂದು ದಿನವಾದರೂ ಆತನನ್ನು ನಾವು  ಕಾಯಬೇಕು.  ಶಿವರಾತ್ರಿಯಂದು ಶಿವನು ಭಕ್ತರನ್ನು ಹರಸುವುದಕ್ಕಾಗಿ ಕೈಲಾಸ  ಲೋಕದಿಂದ ಭೂಲೋಕಕ್ಕೆ ಬರುವುದರಿಂದ ಆತನನ್ನು ಭಕ್ತಿ  ಭಾವದಿಂದ, ಹೃದಯಪೂರ್ವಕವಾಗಿ ಸ್ವಾಗತಿಸಬೇಕಂತಲೂ   ಹೇಳಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಶಿವರಾತ್ರಿ ದಿನದಂದು ಜಾಗರಣೆ  ಮಾಡುತ್ತೇನೆಂಬುದು ಫ್ಯಾಶನ್ ಆಗಿಬಿಟ್ಟಂತಿದೆ. ಇಂದು  ಜಾಗರಣೆ ಮಾಡುವವರ ಸಂಖ್ಯೆಯೇನೋ ಹೆಚ್ಚಾಗಿದೆ. ಆದರೆ,  ಜಾಗರಣೆ ಎಂಬ ಹೆಸರಿನಲ್ಲಿ ಮೋಜು  ಹಾಗೂ ಮಸ್ತಿಗಳೇ  ಹೆಚ್ಚಾಗಿ ಹೋಗಿದೆ. ಶಿವರಾತ್ರಿ ಜಾಗರಣೆ ಎಂದರೆ ಮೋಜು  ಮಸ್ತಿಗಳನ್ನು ಮಾಡುವ ಆಚರಣೆಯಲ್ಲ. ಶಿವರಾತ್ರಿ  ಜಾಗರಣೆಯನ್ನು ಶಿವನ ಸತ್ಯ ಸ್ವರೂಪವನ್ನು ಲಯದ ಮಿಥ್ಯೆಯನ್ನೂ ಅರ್ಥಮಾಡಿಕೊಂಡು ಅವನ ಪ್ರಾರ್ಥನೆ ಭಜನೆ ಹಾಗೂ ಧ್ಯಾನದ ಮುಖಾಂತರ  ಮಾಡಿದರೇನೆ ಶ್ರೇಯಸ್ಕರ.

Saturday, September 24, 2016

Attachment in detachment by Sudhamurthy

Attachment in Detachment ----- Written by Sudha Murti
🔹🔸🔹🔸🔹🔸
When my daughter, the older of my two, wed and left home, I felt a part of me gone.

With a daughter and a son, I know what both mean, differently.

When she was in her teens I felt as if she was my "physical extension" !

So when she left home to set up her own, I felt I lost a limb.

Next time she came to stay with us, I was astonished how her priorities had changed.

We too must've given the same shocks to our own parents !

When she said Amma,
she meant her mother-in-law, not me!

I felt she was always in a hurry to go back to her house and not stay with me for a few more days.

 That was the first time, it dawned on me that I have to start practising detachment with attachment.

Two years after my daughter’s marriage, my son left for higher studies to US.

Having experienced a child's separation once, I was better equipped emotionally.

I plunged head long into various classes held in the city starting from vedanta to healing to ikebana -
 I just wanted to be away from home..since my husband was a 24/7 workaholic.

My son used to write how he was missing my home cooked food, how he was waiting to come back to live in Chennai with us ...

After a few years, he did come back and we got him married.

He started living separately with his wife and we were also happy that they wanted to be independant from the beginning...

But now, it was all changed !

When in the U S, he missed my cooking, now if I called him to come over with his wife for a meal, it was always some excuse like "oh, amma, we have other plans for the day, please don't mistake us if we don't drop in today" !

I could see that his priorities had also changed completely..

We talk so many things and give so much advice to others, but when it comes to our own children, acceptance comes very late. Our next step is to just leave them undisturbed
in every way.

It was at that time, that I made the following, my 'new profile'.

In all my relationships , rather interactions, I give my best and do my best to live up to what I say.

My attachment with them is complete.

However, I remain detached in the sense that I do not expect them to reciprocate my affection.

Most importantly, I make a conscious effort , not to interfere or pass judgements on the lives they choose to lead.

My concern for my near and dear ones will not fade with my detachment.

If you let go of the ones you love, they will never go away –
this is the beauty of attachment with detachment !

I have learnt to love and let go.

This dictum has developed tolerance in me.

When I let the people live the way they want to, I learn to accept them for what they are.

Most importantly ,
I learn to tolerate the world around me and this tolerance brings in me a sense of peace and contentment.

Since both my children live in Chennai, I follow this very strictly, you know why !

Now I have realised that we start growing mentally much more only after the children leave the house and we have to tackle the emotional vacuum, that arises, along with age-related problems .

I specially dedicate this post to my  friends, who are  totally  dependant  on their  children's lives, to nurture their  own  selves  emotionally.

Please develop your  own  intersts, hobbies  etc, however mundane they  seem to be..

We must learn
To love whatever  we  do
instead of
Doing whatever we love Dushanbe

Wednesday, June 08, 2016

"ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಡ್ಡಾಯ"

ಇಂದಿನ ದಿನಗಳಲ್ಲಿ ಮಕ್ಕಳು ಇತ್ತ ಇಂಗ್ಲೀಷ್ ಅತ್ತ ಕನ್ನಡ ಎರಡೂ ಸರಿಯಾಗಿ ಬರದೇ ಎಡಬಿಡಂಗಿಗಳಾಗುತ್ತಿದ್ದಾರೆ.   ಶಾಲೆ ಕಾಲೇಜು ಸಹ ಬಿಡುವ ಮಕ್ಕಳ ಸಂಖ್ಯೆ ಹೆಚ್ಚು ತ್ತಿದೆ.
"ಪ್ರಾಥಮಿಕ ಶಾಲೆಯಲ್ಲಿ ಕನ್ನಡ  ಕಡ್ಡಾಯ"
ಇದು ಎಸ್ಸೆಸ್ ಎಲ್ಸಿವರೆಗೂ    ಮೊಟ್ಟಮೊದಲು ಆಗಲೇಬೇಕು.
ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುತ್ತದೆ. ಅವರ ಭವಿಷ್ಯ ಸುಂದರವಾಗುತ್ತದೆ.

Monday, November 02, 2015

ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳ ಪ್ರಶಸ್ತಿ ವಾಪಾಸಾತಿ ರಾಜಕೀಯ ಪ್ರಹಸನ


ಸಾಹಿತಿ ಸಂಶೋಧಕರಾದ ಡಾ.ಕಲ್ಬುರ್ಗಿಯವರ ಹತ್ಯೆ ಹಾಗೂ ಈ ಹಿಂದೆ ನಡೆದ ಮಹಾರಾಷ್ಟ್ರದವರಾದ ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ ಪಾನ್ಸೆಯವರ ಹತ್ಯೆಯಿಂದ ಸರ್ವಧರ್ಮ ಸಹಿಷ್ಣತೆಗೆ ಹೆಸರಾದ ನಮ್ಮ ದೇಶಕ್ಕೆ ದೊಡ್ಡ ಆಘಾತವೇ ಆಗಿದೆ.
ಒಂದು ಸಾವು ತಿಳಿಸಿಕೊಡುವ ಪಾಠ ಬಹಳ ದೊಡ್ಡದು.
ಆದರೇನು! ಮೇಲಿನ ಹತ್ಯೆಗಳನ್ನು ಖಂಡಿಸುವ ನೆಪದಲ್ಲಿ ಕರ್ನಾಟಕದಲ್ಲಿ ಪ್ರಸ್ತುತ ಮುಂದುವರೆದಿರುವ ರಾಜಕೀಯ ಬೆಳವಣಿಗೆಗಳು, ಅವು ದೇಶದ  ಮೇಲೆ ಬೀರಿರುವ ವ್ಯತಿರಿಕ್ತ ಪರಿಣಾಮಗಳು ಜನಸಾಮಾನ್ಯರಿಗೆ ಗಾಬರಿ ಹುಟ್ಟಿಸುವಂತಿವೆ. ಇತಿಹಾಸದ ಪುಟಗಳನ್ನು ಮಗುಚಿ ನೋಡಿದರೆ, ಹುತಾತ್ಮರ ಸಾವಿನಿಂದ ಕಲಿಯುವುದು ಬಹಳಷ್ಟಿರುತ್ತದೆ.
ಸಾ-ಹಿ-ತಿ ಎಂದರೆ, ಆತ ಜವಾಬ್ದಾರಿಯಿಂದ ಸಾಮಾಜಿಕ ಹಿತವನ್ನು ತಿಳಿಸುವಾತ. ಸಾಮಾಜಿಕ ಬದ್ಧತೆ ಅವನ ಮೂಲ ಮಂತ್ರವೆಂದು ಹೇಳುತ್ತಾರೆ. ಇದೀಗ ಸಾಹಿತಿಗಳು ವಿಚಾರವಾದಿಗಳ ಹತ್ಯೆಯನ್ನು ವೈಭವೀಕರಣ ಮಾಡಿ ರಾಜಕೀಯ ಮಾಡುವುದು ಖಂಡನೀಯವೇ ಆಗಿದೆ.

ಇಂಗ್ಲೀಷ್ ಪ್ರಾಧ್ಯಾಪಕರಾಗಿ ನಾಲ್ಕಾರು ಕನ್ನಡ ಪುಸ್ತಕ ಬರೆದು ಕೊಂಡು ಸಾಹಿತಿ ಎನಿಸಿಕೊಂಡಿದ್ದ ಪ್ರೊ.ಎಸ್.ಕೆ ಭಗವಾನ್ ರು ದಿನಬೆಳಗಾಗುವುದರಲ್ಲಿ ಸುದ್ದಿಯಾದದ್ದು ಶತಶತಮಾನಗಳಿಂದ ಹಿಂದೂಗಳ ಧರ್ಮಗ್ರಂಥವೆನಿಸಿದ್ದ ಭಗವದ್ಗೀತೆಯನ್ನು ಕುರಿತು ಅವಹೇಳನ ಮಾಡಿ,. ಹಿಂದೂಗಳ ದೇವರಾದ ಶ್ರೀರಾಮನನ್ನು ಅವಾಚ್ಯವಾಗಿ ನಿಂದಿಸಿದುದರಿಂದ. ಇಂಥ ಬುದ್ಧಿಜೀವಿಗಳ ವಲಯದಲ್ಲಿ ದೇವರು ಧರ್ಮವನ್ನು ನಿಂದಿಸಿದರೆ ಅವರು ವಿಚಾರವಾದಿಗಳು. ಅದೇ ರಾಜಕೀಯದಿಂದ ದೂರವಿದ್ದು ಧರ್ಮವನ್ನು ಕೊಂಡಾಡುವ ಬಲಪಂಥೀಯರೆನಿಸಿಕೊಂಡವರು ಕೋಮುವಾದಿಗಳು ಎಂದು ಹೇಳುತ್ತ ಇಂಥವರು ಬೊಬ್ಬೊ ಹೊಡೆಯುವುದು ಇದೀಗ ಜನಜನಿತವಾಗಿಬಿಟ್ಟಿದೆ.
ಮೊದಲು ಶಂಕರಾಚಾರ್ಯರನ್ನು ಹೀಗಳೆಯುವ ಪುಸ್ತಕ ಬರೆದು ಏನಕೇನ ಕುಪ್ರಸಿದ್ಧಿಯಾದ ಪ್ರೊ. ಭಗವಾನ್ ರು “ಸಾ-ಹಿ-ತಿ” ಗಳಾಗಿ ಸಾಮಾಜಿಕ ಹಿಂಸೆಗೆ ತಿದಿಯೊತ್ತಿದವರಾಗಿರುವುದು ಕಠೋರವಾಸ್ತವವೇ ಆಗಿದೆಯಲ್ಲವೇ..?
“ಭಗವದ್ಗೀತೆ ಯುದ್ಧವನ್ನು ಹಿಂಸೆಯನ್ನು ಪ್ರಚೋದಿಸುತ್ತದೆ. ವೇಶ್ಯರು, ಶೂದ್ರರು ಪಾಪಿಗಳು” ಎಂದು ಹೇಳುತ್ತದೆ.
ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿ, “ಅಧ್ಯಕ್ಷರು ಅಪ್ಪಣೆಕೊಟ್ಟರೆ ಇಲ್ಲೇ ಎಲ್ಲರೆದುರೇ ಭಗವದ್ಗೀತೆಯನ್ನು ಸುಡುತ್ತೇನೆ” ಎಂದಿದ್ದವರು, ಇದೀಗ ಹಾಗೆ ತಾನು ಭಗವದ್ಗೀತೆಯನ್ನು ಸುಡಲು ಹೇಳಲಿಲ್ಲ. ಆ ಶ್ಲೋಕಗಳನ್ನು ತೆಗೆಯಬೇಕೆಂದೆನಷ್ಟೆ ಎಂದು ತಿಪ್ಪೆಸಾರಿಸುತ್ತಲಿದ್ದಾರೆ. ಆ ಶ್ಲೋಕಗಳು ಹೇಳುವ ಪರಮ ಸತ್ಯವನ್ನು ಅವರ ಮೂಗಿನ ನೇರಕ್ಕೆ ಅರ್ಥ ಮಾಡಿಕೊಂಡಿದ್ದಾರಷ್ಟೇ. ಎಂಬುದೂ ತಿಳಿದ ವಿಷಯವೇ.
ಶ್ರೀಕೃಷ್ಣ ಯುದ್ಧಬೇಡವೆಂದು ಸಂಧಾನ ಮಾಡಿದಾಗ ಐದು ಹಳ್ಳಿಗಳನ್ನೂ ಪಾಂಡವರಿಗೆ ಕೊಡಲೊಪ್ಪದಿದ್ದಾಗ ಧರ್ಮ ಯುದ್ಧ ಅನಿವಾರ್ಯವೆನ್ನುವ, ಪರಮಪಾ,ಪಿಗಳಿಗೂ ಪುನೀತರಾಗಲು ಸಾಧ್ಯವಿದೆ ಎಂದು ಹೇಳುವ ಶ್ರೀಕೃಷ್ಣ ಬೋಧಿಸುವ ಸತ್ವಗುಣ, ರಜೋಗುಣ, ತಮೋಗುಣಗಳಲ್ಲಿ ಸತ್ವಗುಣದ ಹಿರಿಮೆಯನ್ನು ವಿವರಿಸುವ ಗೀತೆಯ 14 ನೇ ಅಧ್ಯಾಯವೊಂದೇ ಸಾಕು ಭಗವದ್ಗೀತೆಯ ಸಾರಸತ್ವವನ್ನು ತಿಳಿಸುವುದಕ್ಕೆ. ಯಾಕೆಂದರೆ, ಈ ವ್ಯವಹಾರೀಕ ಪ್ರಪಂಚದಲ್ಲಿ ಏನೆಲ್ಲವನ್ನೂ ಪ್ರಜ್ಞಾಪೂರ್ವಕವಾಗಿ ಆತ್ಮಸ್ಥೈರ್ಯದಿಂದ ಅಂತಃಸತ್ವದಿಂದ ಎದುರಿಸುತ್ತಾ, ಸಭ್ಯನಾಗಿ ಸಭ್ಯಗೃಹಸ್ಥನಾಗಿ ಸತ್ವಶಾಲಿಯಾಗಿ ಬದುಕುವುದನ್ನು ಬಿಟ್ಟರೆ ಬೇರೇನಿದೆ ಹೇಳಿ?.

ಬೌದ್ಧ ಧರ್ಮ ಮತ್ತು ಹಿಂದೂ ಧರ್ಮವನ್ನು ಹೋಲಿಸಿ ವಿಶ್ಲೇಷಣೆ ಮಾಡಿದ, ಹಿಡಿಯಷ್ಟು ಬ್ರಾಹ್ಮಣರ (ಬ್ರಾಹ್ಮಣರೆಲ್ಲರೂ ಅಲ್ಲ) ಪುರೋಹಿತಶಾಹಿ ಪ್ರವೃತ್ತಿಯನ್ನು ಖಂಡಿಸಿದ, ನಮ್ಮ ದೇಶದ ಸಂಸ್ಕೃತಿ ಪರಂಪರೆ ಹಾಗೂ ಹಿಂದೂಧರ್ಮದ ಬಗ್ಗೆ ಅಮೆರಿಕಾದ ವಿಶ್ವಧರ್ಮ ಸಮ್ಮೇಳನದಲ್ಲಿ ಹೆಮ್ಮೆಯಿಂದ ಭಾಷಣ ಮಾಡಿ ಜಗತ್ತೇ ತಲೆದೂಗುವಂತೆ ಮಾಡಿದ ಸ್ವಾಮಿವಿವೇಕಾನಂದರನ್ನು, ಸರಿಯಾಗಿ ಓದಿಕೊಂಡಿರದ ಭಗವಾನ್ ರು ವಿದ್ಯಾರ್ಥಿಗಳಿಗೆ ಪಾಠ ಹೇಳುವ ಪ್ರಾಧ್ಯಾಪಕರಾಗಿ, ತಮ್ಮ ಸಾಮಾಜಿಕಬದ್ಧತೆ ಜವಾಬ್ದಾರಿಯನ್ನು ಮರೆತಿದ್ದಾರೆ. ತಮಗೆ ಅವಕಾಶ ಸಿಕ್ಕ ವೇದಿಕೆಗಳಲ್ಲೆಲ್ಲಾ ದೈವನಿಂದನೆ ಧರ್ಮನಿಂದನೆ ಮಾಡುತ್ತಾ,
ಬೆಂಗಳೂರಿನ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಎಂಬ ಮಕ್ಕಳ ಕಾರ್ಯಕ್ರಮದಲ್ಲಿಯೂ ರಾಮಾಯಣ ಓದಬೇಡಿ, ಓದಿದರೆ ಆತ್ಮಹತ್ಯೆಮಾಡಿಕೊಳ್ಳುವ ಮನಃಸ್ಥಿತಿ ಬರುತ್ತದೆ ಎಂದು ಮಕ್ಕಳಿಗೆ ಹೇಳಿದಾಗ, ಸಂಘಟಕರು ಪದೇ ಪದೇ ಎಚ್ಚರಿಸಿದರೂ ಕಿವಿಗೊಡದೇ ಮತ್ತೆ ತನ್ನದೇ ಸರಿಯೆಂದು ಮುಂದುವರೆಸುತ್ತಾ, ಶ್ರೀರಾಮ ದೇವರಲ್ಲ. ಏಕಪತ್ನೀವ್ರತಸ್ಥನಲ್ಲ, ಅವನು ಸುರಾಪಾನ ಮಾಡುತ್ತ ಕಾಲ ಕಳೆಯುತ್ತಿದ್ದ. ರಾಮ, ಕೃಷ್ಣ ಮುಂತಾದವರನ್ನು ಪೂಜಿಸಬೇಡಿ, ಅವರು ಅಪ್ಪನಿಗೆ ಹುಟ್ಟಿದ ಮಕ್ಕಳಲ್ಲ ಎನ್ನುವ ಈ ವ್ಯಕ್ತಿಗೆ ಕರ್ನಾಟಕ ಸರ್ಕಾರ ರಾಜ್ಯಸಾಹಿತ್ಯ ಅಕಾಡೆಮಿ ಘೋಷಿಸಿದೆಯಲ್ಲದೇ ಇಬ್ಬರು ಭದ್ರತಾ ಸಿಬ್ದಂದಿಯನ್ನೂ ಕೊಟ್ಟಿ ತನ್ನ ಧೋರಣೆ ಮರೆದಿದೆ.
ವಿಪರ್ಯಾಸವೆಂದರೆ, ಇದೀಗ ಕರ್ನಾಟಕ ಸರ್ಕಾರ ವಾಲ್ಮೀಕಿ ಜಯಂತಿಯನ್ನು ಆಚರಿಸಿದೆಯಲ್ಲದೇ, ಶಾಲಾಪಠ್ಯದಲ್ಲಿ ವಾಲ್ಮೀಕಿ ರಾಮಾಯಣ ಅಳವಡಿಕೆ ಖಂಡಿತವಾಗಿಯೂ ಆಗಲಿದೆ ಎಂದೇ ಮಾನ್ಯ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಪುನರುಚ್ಚರಿಸಿದ್ದಾರೆಂದರೆ, ಇವರ ರಾಜಕೀಯನೀತಿ ಕಂಡು ಮರುಕವಾಗದಿರದು.
ಹಿಂದಿನ ಸರ್ಕಾರ ಶಾಲೆಯಲ್ಲಿ ಅದೇ ರಾಮಾಯಣ ಭಗವದ್ಗೀತೆ ಯನ್ನು ಪಠ್ಯದಲ್ಲಿ ಅಳವಡಿಸಲೆತ್ನಿಸಿದಾಗ ಕೇಸರೀಕರಣ ಮಾಡುತ್ತಿದ್ದಾರೆಂದೇ ಬೊಬ್ಬೆಹೊಡೆದಿದ್ದು ಇದೇ ಪಕ್ಷವೇ ಅಲ್ಲವೇ...? ಇದೆಲ್ಲವನ್ನು ಜನಸಾಮಾನ್ಯರು ಗಮನಿಸುತ್ತಲೇ ಇದ್ದಾರೆ. “ಇದೀಗ ಬಿತ್ತೇವು ಸಹಿಷ್ಣುತೆಯ ಬೀಜ” ಎಂದಿರುವ ಸಿ.ಎಂ. ಹೇಳಿಕೆ ವಿಚಿತ್ರ ವಿರೋಧಾಭಾಸವಲ್ಲವೇ..?
ರಾಷ್ಟ್ರಕವಿ ಕುವೆಂಪುರವರು ವಿಶ್ವಮಾನವ ಪ್ರಜ್ಞೆ ಬಿತ್ತಿದವರಾಗಿ ಹೇಳಿದುದನ್ನು ಇಲ್ಲಿ ಸ್ಮರಿಸಬಹುದು, "ಇದು ವಿಚಿತ್ರ ವಿರೋಧಾಭಾಸಗಳ ದೇಶ ಇಲ್ಲಿ ಏನೂ ಆಗಬಹದು.ಅದಕ್ಕೆ ಆಶ್ಚರ್ಯ ಪಡಬೇಕಿಲ್ಲ. ಆದರೆ, ಈಗ ಆತಂಕ ಪಡಬೇಕಾಗಿದೆ.

ಇನ್ನು ಗುಂಪುಗಾರಿಕೆಯಲ್ಲಿ, ಕೆಲವು ಕಲಾವಿದರು, ವಿಜ್ಞಾನಿಗಳು ತಮ್ಮ ಗೆ ಬಂದ ಪ್ರಶಸ್ತಿಯನ್ನು ವಾಪಾಸು ಮಾಡುತ್ತಿದ್ದಾರೆಂದರೆ, ಅವರ ಯಾವ ಅತ್ಯತ್ತಮ ಕೃತಿಗೆ ಅಕಡೆಮಿ ಪ್ರಶಸ್ತಿ ಪಡೆದುಕೊಂಡಿದ್ದಾರೋ ಆ ಕೃತಿಗೇ ಅಗೌರವ ತಂದುಕೊಂಡಂತಾಗಿದೆಯಲ್ಲದೇ, ಈ ಇಳಿವಯಸ್ಸಿನವರೆಗೆ ಅವರು ನಂಬಿಕೊಂಡು ಬಂದ ಸಾಮಾಜಿಕಮೌಲ್ಯಗಳಿಗೂ ಅಪಚಾರವೆಸಗಿದಂತೆಯೇ ಆಗಿದೆಯಲ್ಲವೇ...?
ಡಾ. ಕಲ್ಬುಬರ್ಗಿಯವರೂ ಸಹ ಸ್ವತಃ ಹಿಂದೂಧರ್ಮದವರೇ ಆಗಿದ್ದು ವಿರಶೈವ ಲಿಂಗಾಯಿತ ಹಿಂದೂಧರ್ಮವೇ ಅಲ್ಲ. ಕಲ್ಲು ಮೂರ್ತಿಯಲ್ಲಿ ದೇವರಿಲ್ಲ ಎಂಬದನ್ನು ಬೆಂಬಲಿಸುವ ಹೇಳಿಕೆ ನೀಡಿ ತೀವ್ರ ವಿವಾದಾಕ್ಕೀಡಾಗಿಬಿಟ್ಟರು. ವಿಚಿತ್ರವೆಂದರೆ, ಹಿಂದೂಧರ್ಮದಲ್ಲಿ ಹೇಳಿರುವಂತೆ ತ್ರಿಮೂರ್ತಿಗಳಲ್ಲಿ ಶಿವನೂ ಒಬ್ಬನು. ಹಿಂದೂಗಳ ದೇವರಾದ ಶಿವನನ್ನು ಕಲ್ಲಿನ ರೂಪದ ಲಿಂಗದಲ್ಲಿ ಪೂಜಿಸುತ್ತಾರೆ; ಲಿಂಗಾಯಿತರು ವಿರಶೈವರು. ಕರಸ್ಥಲದಲ್ಲಿಟ್ಟುಕೊಂಡು ದಿನವೂ ಆರಾಧಿಸುತ್ತಾರೆ.
ಕಲುಬುರ್ಗಿಯವರ ಇನ್ನಿತರ ವೈಚಾರಿಕತೆ ಸಂಶೋಧನೆಗಳು ಮಾತ್ರ ಮಾನ್ಯವೆನಿಸಿದ್ದರೂ, ಪ್ರಾಯೋಗಿಕವಾಗಿ ಅನುಭವವೇದ್ಯವಲ್ಲದ ಕಲುಬುರ್ಗಿಯವರ ಧರ್ಮನಿಂದನೆ ದೈವನಿಂದನೆಯ ವಿವಾದಾಸ್ಪದ ಹೇಳಿಕೆಗಳು ಎಂದಿಗೂ ಸಂಶೋಧನೆ ಎನಿಸಿಕೊಳ್ಳಲಾರವು. ಸಾಮಾಜಿಕ ಮನ್ನಣೆ ಪಡೆಯಲಾರವಲ್ಲ....
ಸಾಹಿತಿಗಳ ಪ್ರಶಸ್ತಿ ವಾಪಾಸಾತಿ ಪ್ರಹಸನವದೆಷ್ಟು ಗೊಂದಲಕರ ಎಂಬುದಕ್ಕೆ ಇತ್ತೀಚೆಗೆ ಪ್ರಶಸ್ತಿ ವಾಪಾಸಾತಿ ಮಾಡಿದ ಮಹನೀಯರಿಗೆಲ್ಲ ಬೆಂಬಲಿಸಿ ಪ್ರಶಸ್ತಿ ವಾಪಾಸಾತಿ ಹುಚ್ದಚಲ್ಲವೆಂದ ಖ್ಯಾತ ಸರೋದ್ ವಾದಕ ಅಮ್ಜದ್ ಆಲಿ ಖಾನ್ ಅವರು ಸಂದರ್ಶನದ ಕೊನೆಯಲ್ಲಿ,
"ನಿವೂ ಪ್ರಶಸ್ತಿ ವಾಪಾಸು ಮಾಡುವಿರಾ..?" ಎಂದು ಕೇಳಿದ ಪ್ರಶ್ನೆಗೆ ಅವರು ಈ ಕೆಳಗಿನಂತೆ ಉತ್ತರಿಸುದುದುದೇ ಉದಾಹರಣೆಯಾಗಿದೆ.
"ನನ್ನ ಸರೋದ್ ತಯಾರಿಸುವವರು ಯಾರು ಗೊತ್ತಾ? ಹೇಮೇಂದ್ರ ಚಂದ್ರಸೇನ್. ಅವರು ಅದನ್ನು ಚೆನ್ನಾಗಿ ತಯಾರಿಸದೇ ಇದ್ದರೆ, ನಾನಿದನ್ನು ನುಡಿಸುವುದಾದರೂ ಹೇಗೆ? ಪರಸ್ಪರ ನಂಬಿಕೆ ಮತ್ತು ಪ್ರೀತಿಯೇ ನಮ್ಮ ಶಕ್ತಿ"


ಸಾಹಿತಿಗಳು ತಮ್ಮ ಅತ್ಯುತ್ತಮ ಕೃತಿಗೆ ಪಡೆದ ಪ್ರಶಸ್ತಿಯನ್ನು ವಾಪಾಸಾತಿ ಮಾಡುವುದೇ ಆಗಿದ್ದರೆ, ಸಮಾಜದಲ್ಲಿ ಅಸಹಿಷ್ಣುತೆ ಬಿತ್ತುವ ಹೇಳಿಕೆಗಳನ್ನು ನೀಡಿದ ವ್ಯಕ್ತಿ ಪ್ರೊ.ಎಸ್.ಕೆ. ಭಗವಾನ್ ರಿಗೆ ಅದೇ ಗೌರವಾನ್ವಿತ ರಾಜ್ಯ ಸಾಹಿತ್ಯ ಅಕಾಡೆಮೆ ಪ್ರಶಸ್ತಿ ಕೊಡುವುದನ್ನು ಖಂಡಿಸಿ ತಮಗೆ ಸಂದ ಪ್ರಶಸ್ತಿಗಳನ್ನು ವಾಪಾಸು ಮಾಡುತ್ತಿದ್ದೇವೆ ಎಂದು ಹೇಳಿದ್ದರೆ ದೇಶಾದ್ಯಂತ ಸಾರಸ್ವತಲೋಕವೇ ಹೆಮ್ಮೆಯಿಂದ ಬೀಗುತ್ತಿತ್ತು.
ಬದಲಿಗೆ ಕಲ್ಬುರ್ಗಿಯವರ ಹತ್ಯೆ ಖಂಡಿಸುವ ನೆಪದಲ್ಲಿ ಸಾಹಿತಿಗಳು ಪ್ರಶಸ್ತಿ ವಾಪಾಸಾತಿ ರಾಜಕೀಯವಾಗಿ ಪ್ರಹಸನವಾಗಿರುವುದು ತಿರಾ ವಿಷಾದನೀಯವೇ. ಕಲುಬುರ್ಗಿಯವರ ಹತ್ಯೆಯನ್ನು ಖಂಡಿಸುವ ಇವರುಗಳು ಬೇರೆ ಶಾಂತ ರೀತಿಯ  ಮಾರ್ಗವನ್ನು ಹಿಡಿಯಬೇಕಾಗಿತ್ತು.
ಸ್ನೇಹಿತರೇ,
ಇದೆಲ್ಲ ವಿದ್ಯಾಮಾನಗಳನ್ನು  
 ನೋಡಿ ಮೌನವಾಗಿರುವ ನಮ್ಮ ಕರ್ನಾಟಕದ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ನಾ.ಡಿಸೋಜ, ನಿಸ್ಸಾರ್ ಅಹಮದ್, ಕವಿಗಳಾದ ಎಚ್ ಎಸ್ ವೆಂಕಟೇಶ ಮೂರ್ತೀ, ಎನ್ ಲಕ್ಷ್ಮಿ ನಾರಾಯಣ ಭಟ್ಟ, ಸುಮತೀಂದ್ರ ನಾಡಿಗ್, ಸಂಶೋಧಕರಾದ ಚಿದಾನಂದ ಮೂರ್ತಿ, ವಿಮರ್ಶಕ ಎಲ್.ಎಸ್.ಶೇಷಗಿರಿ ರಾಯರು ಶತಾಯುಷಿಗಳಾದ ವೆಂಕಟ ಸುಬ್ಬಯ್ಯನವರು ಮತ್ತಿರರ ಸಾಹಿತಿಗಳುಕಲಾವಿದರು, ವಿಜ್ಞಾನಿಗಳಿಗೆ ಹಾಗೂ ಇವರೊಂದಿಗೇ ಇರುವ ಇತರೆ ರಾಜ್ಯದ ಸಾಮಾಜಿಕ ಹಿತಚಿಂತಕರಾದ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳಿಗೆಲ್ಲ ನಾವು ವಿನಮ್ರತೆಯಿಂದ ವಂದಿಸೋಣ.

Tuesday, September 01, 2015

ಇನ್ ಫೋಸಿಸ್ ಸುಧಾಮೂರ್ತಿ

ನೀವು ಇನ್ ಪೋಸಿಸ್ ಸುಧಾಮೂರ್ತಿ ಅವರ ಬಗ್ಗೆ ಕೇಳಿರುತ್ತಿರಿ, ಓದಿರುತ್ತೀರಿ. ಆದರೂ ಅವರ ಇತ್ತೀಚೆನ  ಲೇಖನವಿದು.
ನೀವೂ ಓದಿ. ಕಣ್ ತುಂಬಿ ಬರುತ್ತದೆ.
ಇಂದಿನ ಮಹಿಳೆಯರಿಗೆ ಆದರ್ಶಪ್ರಾಯ.